Facebook Twitter RSS
banner

Latest News

ನರಳಿ ನರಳಿ ಸತ್ತ ಹಾವು



ಒಂದು ಕೊಳ. ಆ ಕೊಳದಲ್ಲಿ ಕಪ್ಪೆಗಳು ಹಾಗೂ ಏಡಿಗಳು ವಾಸವಾಗಿದ್ದವು. ಒಂದು ದಿನ ಆ ಕೊಳಕ್ಕೆ ಒಂದು ಹಾವು ಸೇರಿಕೊಳ್ಳುತ್ತದೆ. ಆ ಹಾವು ದಿನವೂ ಒಂದೊಂದೇ ಕಪ್ಪೆಗಳನ್ನು ತಿನ್ನುತಿರುತ್ತದೆ. ಈ ವಿಷಯ ಕಪ್ಪೆಗಳ ಹಾಗೂ ಏಡಿಗಳ ರಾಜರಿಗೆ ಗೊತ್ತಾಗುತ್ತದೆ. ಆಗ ರಾಜರು ಚರ್ಚೆ ಮಾಡುತ್ತಾರೆ, ಹೇಗೆ ಆ ಹಾವನ್ನು ಸಾಯಿಸುವುದೆಂದು.

ಒಂದು ದಿನ ಹಾವು ಎಂದಿನಂತೆ ಕಪ್ಪೆಯನ್ನು ತಿನ್ನಲು ಬರುತ್ತವೆ. ಕಪ್ಪೆ ಕುಪ್ಪಳಿಸುತ್ತ ಹಾವಿನತ್ತ ಬರುತ್ತದೆ. ಹಾವು ಅದನ್ನು ಹಿಡಿಯಲು ಬಂದಾಗ ಕಪ್ಪೆ ಕುಪ್ಪಳಿಸುತ್ತ ಏಡಿಗಳ ಬಿಲಕ್ಕೆ ಹಾರುತ್ತದೆ. 

ಹಾವು ಕಪ್ಪೆ ಹಿಡಿಯಲು ಏಡಿಗಳ ಬಿಲಕ್ಕೆ ತಾಳೆ ಹಾಕಿದಾಗ ಏಡಿಗಳ ಹಾವಿನ ತಲೆಗೆ ಚುಚ್ಚಿಚುಚ್ಚಿ ನೋವು ಮಾಡುತ್ತವೆ. ಹಾವು ನೋವಿನಿಂದ ನರಳಿ ನರಳಿ ಸಾಯುತ್ತದೆ.


ಬುದ್ದಿಮಾತು - Kannada Stories Kannada

 ಬುದ್ದಿಮಾತು


ಒಂದೂರಿನಲ್ಲಿ ಒಬ್ಬ ಕವಿ ಇದ್ದ. ಅವನು ಯಾವಾಗಲೂ ತನ್ನಷ್ಟಕ್ಕೆ ಮಾತನಾಡಿಕೊಂಡು ತಿರುಗಾಡುತ್ತಿದ್ದ. ಅವನೇ ಪ್ರಶ್ನೆ ಕೇಳುತ್ತಿದ್ದ. ಪ್ರಶ್ನೆಗಳಿಗೆ ಅವನೇ ಉತ್ತರ ಕೊಡುತ್ತಿದ್ದ. ಯಾರಾದರೂ ಅವನ ಮಾತು ಮಾತ್ರ ಕೇಳಿಸಿಕೊಂಡರೆ, ಯಾರೋ ಇಬ್ಬರು ಮಾತನಾಡ ಕೊಳ್ಳುತ್ತಿರುವಂತೆ ಅವರಿಗೆ ಅನಿಸುತ್ತಿತ್ತು.

ಒಂದು ದಿನ ಯಾರೂ ಅವನನ್ನು ತಡೆದು ಕೇಳಿ ದರು." ಅಯ್ಯಾ, ನೀವು ನಿಮ್ಮಷ್ಟಕ್ಕೆ ಯಾಕೆ ಮಾತನಾಡುತ್ತಿದೀರಿ?" ಕವಿ ನಕ್ಕು ಉತ್ತರಿಸಿದ. "ಅದಕ್ಕೆ ಎರಡು ಕಾರಣ ಇದೆ, ಸ್ವಾಮೀ. ಒಂದು, ನನಗೆ ಬುದ್ದಿವಂತರ ಜೊತೆಗೆ ಮಾತನಾಡಲು ಇಷ್ಟವಾಗುತ್ತದೆ. ಎರಡನೆಯದು ನನಗೆ ಬುದ್ದಿವಂತರ ಮಾತು ಕೇಳಲು ಇಷ್ಟವಾಗುತ್ತದೆ. ಅವೆರಡುವು ನಾನೀ ಆಗಿರುವಾಗ ಬೇರೆಯವರ ಜೊತೆ ಯಾಕೆ ವ್ಯರ್ಥ ಸಮಯ ಕಳೆಯಲಿ?"

ಕೋಣೆ ತುಂಬುವ ವಸ್ತು - Kannada Stories in Kannada

  ಕೋಣೆ ತುಂಬುವ ವಸ್ತು


ಒಬ್ಬ ವ್ಯಾಪಾರಿ ಹಾಸಿಗೆ ಹಿಡಿದಿದ್ದ. ಅವನಿಗೆ ಮೂರು ಮಕ್ಕಳು. ಅವರನ್ನು ತನ್ನ ಬಳಿಗೆ ಕರೆದು ಹೇಳಿದ - "ಮಕ್ಕಳೀ ನನ್ನ ನಂತರ ನಿಮ್ಮಲ್ಲಿ ಒಬ್ಬರು ಮಾತ್ರ ನನ್ನ ವ್ಯಾಪಾರವನ್ನು ಮುಂದುವರೆಸಬೇಕುನಿಮ್ಮಲ್ಲಿ ಎಲ್ಲರಿಗಿಂತ ಬುದ್ದಿವಂತನಿಗೆ ಅದನ್ನು ಕೊಡುತ್ತೇನೆ" ಎಂದ.

ಮೂವರು ತಾನು ಬುದ್ದಿವಂತ ತಾನು ಬುದ್ಧಿವಂತ ಎಂದು ಹೇಳಿಕೊಂಡರು.

ನೀವು ಮೂವರು ಮಾರುಕಟ್ಟೆಗೆ ಹೋಗಿ ನಿಮ್ಮ ಕಿಸೆಯಲ್ಲಿ ಇಡುವಷ್ಟು ಚಿಕ್ಕ ಯಾವುದಾದರೂ ಒಂದು ವಸ್ತುವನ್ನು ತನ್ನಿ. ಅದರಲ್ಲಿ ಈ ಕೋಣೆಯನ್ನು ತುಂಬಲು ಸಾಧ್ಯವಾಗಬೇಕು. ಸರಿಯಾದ ವಸ್ತುವನ್ನು ತಂದವನೆ ನನ್ನ ಉತ್ತರಾಧಿಕಾರಿಯಾಗುತ್ತಾನೆ" ಎಂದು ಮುದುಕ ಹೇಳಿದ.

ಮೂವರು ಮಾರುಕಟ್ಟೆಗೆ ಹೋದರೂ. ತಮಗೆ ತೋಚಿದ ವಸ್ತುಗಳನ್ನು ಖರೀದಿಸಿ ತಂದರು.

ಹಿರಿಯವನು ತಂಡದ್ದು ಕಿಸೆತುಂಬ ಬೈಹುಲ್ಲು. "ಕೋಣೆಯ ಎಷ್ಟು ಜಾಗ ಇದರಲ್ಲಿ ತುಂಬುತ್ತದೆ, ತೂರಿಸು?" ಮುದುಕ ಹೇಳಿದ. ಹಿರಿಯವನು ಬೈಹುಲ್ಲನ್ನು ನೆಲದ ಮೇಲೆ ಹಾಸಿದ. ಸ್ವಲ್ಪ ಜಾಗವೇ ಮುಚ್ಚಿತು.

ಎರಡನೆಯವನು ಕಿಸೆಯಲ್ಲಿ ತೆಳ್ಳಗಿನ ಬಟ್ಟೆ ತುರುಕಿಸಿಕೊಂಡು ತಂದಿದ್ದ. ಅದನ್ನು ನೆಲದ ಮೇಲೆ ಹರಡಿದ. ಕೋಣೆಯ ಅರ್ಧದಷ್ಟು ಮಾತ್ರ ಮುಚ್ಚಿಕೊಂಡಿತು.

ಮೂರನೆಯವನು ಕಿಸೆಯಿಂದ ತಾನು ತಂದಿದ್ದ ವಸ್ತುವನ್ನು ತೆಗೆದ. ಅದನ್ನು ನೋಡುತ್ತಲೇ ಮುದುಕನ ಮುಖ ಸಂತೋಷದಿಂದ ಅರಳಿತು. "ನನ್ನ ವ್ಯಾಪಾರ ನಡೆಸುವವನು ನೀನೇ" ಎಂದ.

ಮೂರನೆಯವನು ತಂಡ ವಸ್ತು ಯಾವುದು? ಊಹಿಸಿ ಹೇಳಿ.

ಉತ್ತರ: ಮೂರನೆಯವನು ತಂದದ್ದು ಬೆಂಕಿ ಪೊಟ್ಟಣ. ಇದು ಕಿಸೆಯಲ್ಲಿ ಹಿಡಿಯುವಷ್ಟು ಚಿಕ್ಕದ್ದು. ಕಡ್ಡಿ ಗೀರಿದರೆ, ಕೋಣೆ ತುಂಬುವಷ್ಟು ಬೆಳಕು ಬರುತ್ತದೆ.


ಬೇಸ್ತು ಬಿದ್ದ ಬೆಕ್ಕು - Kannada Stories in Kannada

ಬೇಸ್ತು ಬಿದ್ದ ಬೆಕ್ಕು



ಒಮ್ಮೆ ಒಂದು ಬೆಕ್ಕು ಇಲಿಯೊಂದನ್ನು ಓಡಿಸಿಕೊಂಡು ಬಂದಿತು. ಇಲಿ ಬೆಕ್ಕಿಗೆ ಸಿಗದೇ ಒಂದು ಶೀಷೆಯೊಳಗೆ ಸೇರಿತು. ಬೆಕ್ಕು ಬೇಸರಗೊಂಡು ಹೊರಟು ಹೋಯಿತು. ಇಲಿಯನ್ನು ಕಾಪಾಡಲು ಇಲಿಗಳ ದಂಡೇ ಬಂದಿತು. ಒಂದು ಇಲಿ ಉಪಾಯ ತಿಳಿಸಿತು. ಆ ಉಪಾಯದಂತೆ ಇಲಿಯೊಂದು ಶೀಷೆಯ ಬಳಿ ಕುಳಿತುಕೊಂಡಿತು. ಮತ್ತೊಂದು ಇಲಿ ಅದರ ಮೇಲೆ ಹತ್ತಿತು. ಇನ್ನೊಂದು ಇಲಿ ಅದರ ಮೇಲೆ ಹತ್ತಿ ತನ್ನ ಬಾಲವನ್ನು ಇಲಿ ಬಿಟ್ಟಿತು. ಶೀಷೆಯೊಳಗಿದ್ದ ಇಲಿ ಬಾಲ ಹಿಡಿದು ಮೇಲೆ ಬಂದಿತು. ಅಷ್ಟರಲ್ಲಿ ಬೆಕ್ಕು ಉಪಾಯವನ್ನು ಯೋಚಿಸಿ ಇಲಿ ಹಿಡಿಯಲು ಬಂದಿತು. ಬೆಕ್ಕನ್ನು ಕಂಡು ಇಲಿಗಳು ಓಡಿಹೋದವು. ಇಳಿಯು ಶೀಶೆಯಲ್ಲಿ ಇಲ್ಲದುದನ್ನು ಕಂಡು ಬೆಕ್ಕು ಹೊರಟು ಹೋಯಿತು. ಬೆಕ್ಕು ಬೇಸ್ತು ಬಿದ್ದಿತು.

 

ಸಿಂಹ ಮತ್ತು ಇಲಿ - Kannada Stories in Kannada

 ಸಿಂಹ ಮತ್ತು ಇಲಿ



ಒಂದು ದಟ್ಟವಾದ ಕಾಡಿನಲ್ಲಿ ಒಮ್ಮೆ ಒಂದು ಸಿಂಹ ವಾಸ ಮಾಡುತ್ತಿತ್ತು. ಅದು ದಿನವೆಲ್ಲ ಬೇಟೆಗೆ ಹೋಗಿದ್ದ ಕಾರಣ ಅದಕ್ಕೆ ಸುಸ್ತು ಉಂಟಾಯಿತು. ಆದ್ದರಿಂದ ಅದು ಒಂದು ಮರದ ಕೆಳಗೆ ಮಲಗಿಕೊಂಡಿತು. ಅತೀ ಶೀಘ್ರದಲ್ಲೇ ಅದಕ್ಕೆ ಘಾಡವಾದ ನಿದ್ರೆ ಹತ್ತಿತು.


ಆ ಸಂದರ್ಭದಲ್ಲಿ ಒಂದು ಪುಟ್ಟ ಇಲಿ ಆ ಕಡೆ ಬಂದಿತು, ಅದು ಆ ದೊಡ್ಡ ಸಿಂಹವನ್ನು ನೋಡಿತು. ಅದು ಸಿಂಹದ ಇಡೀ ದೇಹದ ಮೇಲೆ ಓಡಾಡಿತು, ಅದರಿಂದ ಸಿಂಹಕ್ಕೆ ಎಚ್ಚರ ಉಂಟಾಯಿತು. ಸಿಂಹವು ಕೋಪಗೊಂಡು ಇಲಿಯನ್ನು ಹಿಡಿದುಕೊಂಡಿತು. ಸಿಂಹವು ಹೇಳಿತು, " ನಾನು ಈ ಕಾಡಿನ ರಾಜ. ನನ್ನ ಮೇಲೆ ಹಾರಲು ನಿನಗೆಷ್ಟು ಧೈರ್ಯ? ನಿನ್ನನ್ನು ಈಗಲೇ ತುಳಿದು ಸಾಯಿಸಿಬಿಡುತ್ತೇನೆ."


ಪುಟ್ಟ ಇಲಿ ಭಯದಿಂದ ನಡುಗಿತು. “ಓ, ಪ್ರಾಣಿಗಳ ರಾಜ! ಅದು ಹೇಳಿತು.,“ನಿಮ್ಮ ನಿದ್ದೆಗೆ ಭಂಗ ತಂದಿದ್ದಕ್ಕೆ ಕ್ಷಮಿಸಿ. ದಯವಿಟ್ಟು ನನ್ನನ್ನು ಹೋಗಲು ಬಿಡಿ” ಎಂದು ಹೇಳಿತು.


ಸಿಂಹವು ಇಲಿಯ ಮೇಲೆ ಕರುಣೆ ತೋರಿ ಅದನ್ನು ಬಿಡುಗಡೆ ಮಾಡಿತು. 

ಕೆಲವು ದಿನಗಳ ನಂತರ ಸಿಂಹವು ಬೇಟೆಗಾರನ ಬಲೆಗೆ ಬಿದ್ದಿತು. ಹೊರ ಬರಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಅದು ಅಸಹಾಯಕತೆಯಿಂದ ಜೋರಾಗಿ ಘರ್ಜಿಸಿತು.


ಇಲಿ ಅದರ ಶಬ್ದ ಕೇಳಿ ಓಡಿ ಬಂದಿತು. ಅದು ಬಲೆಯಲ್ಲಿ ಸಿಂಹವನ್ನು ಕಂಡಿತು. ಅದು ತನ್ನಷ್ಟಕ್ಕೆ ತಾನೇ ಹೇಳಿಕೊಂಡಿತು, “ನನ್ನ ರಾಜನು ತೊಂದರೆಯಲ್ಲಿದ್ದಾನೆ. ನಾನು ಈಗ ಅವನಿಗೆ ಸಹಾಯ ಮಾಡಬೇಕು. ”

ಅದು ತನ್ನ ಚೂಪಾದ ಹಲ್ಲುಗಳಿಂದ ಬಲೆಯನ್ನು ತುಂಡು ತುಂಡಾಗಿ ಕತ್ತರಿಸತೊಡಗಿತು. ಸಿಂಹ ಈಗ ಬಲೆಯಿಂದ ಮುಕ್ತವಾಗಿತ್ತು. "ಇಲಿ ಮರಿ ನಿನಗೆ ಧನ್ಯವಾದಗಳು",ಅದು ಹೇಳಿತು," ನೀನು ನನಗೆ ಸಹಾಯ ಮಾಡುತ್ತೀಯ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ".